ಎಲ್ಲರಿಗೂ ನಮಸ್ಕಾರ, ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳಿಗೆ ರಾಜ್ಯ ಸರ್ಕಾರದಿಂದ ದಸರಾ ಹಬ್ಬಕ್ಕೆ ಬಂಪರ್ ಗಿಪ್ಟ್. ಜುಲೈ ಮತ್ತು ಆಗಸ್ಟ್ ತಿಂಗಳಿನ ಹಣವು (GruhaLakshmi Amount) ಯಾವಾಗ ನಿಮ್ಮ ಖಾತೆಗೆ ಜಮಾ ಆಗಲಿದೆ ಎಂದು ಕಾಯುತ್ತಿದ್ದೀರಾ..? ಈ ಲೇಖನದಲ್ಲಿ ಮಾಹಿತಿ ನೀಡಲಿದ್ದೇವೆ ಓದಿರಿ.
ರಾಜ್ಯ ಸರ್ಕಾರವು ಜಾರಿಗೆ ತಂದಿರುವ ಐದು ಗ್ಯಾರಂಟಿ ಯೋಜನೆಗಳಲ್ಲಿ ಗೃಹಲಕ್ಷ್ಮೀ ಯೋಜನೆಯು ಒಂದಾಗಿದೆ. ಈ ಯೋಜನೆಯ ಮೂಲಕ ಯಜಮಾನಿ ಮಹಿಳೆಯರಿಗೆ ಪ್ರತಿ ತಿಂಗಳು ಎರಡು ಸಾರವಿ ರೂಪಾಯಿಗಳನ್ನು ನೇರವಾಗಿ ಅವರ ಖಾತೆಗೆ ಜಮಾ ಮಾಡಲಾಗುತ್ತದೆ. ಕೋಟಿಗೂ ಅಧಿಕ ಮಹಿಳೆಯರು ಅರ್ಜಿ ಸಲ್ಲಿಸಿ ಲಾಭ ಪಡೆದುಕೊಂಡಿದ್ದಾರೆ.
GruhaLakshmi Amount Of 12th and 13th Installment:
ಗೃಹಲಕ್ಷ್ಮಿ ಯೋಜನೆಯ ಜುಲೈ ಮತ್ತು ಆಗಸ್ಟ್ ತಿಂಗಳ ಹಣವನ್ನು 2 ಕಂತಿನಲ್ಲಿ ಬಿಡುಗಡೆ ಮಾಡಲಾಗಿದ್ದು, ಅಕ್ಟೋಬರ್ 7 ಮತ್ತು 9 ರಂದು ಫಲಾನುಭವಿಗಳ ಖಾತೆಗೆ ಹಣ ಜಮೆ ಆಗಲಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆಯಾದ ಲಕ್ಷ್ಮೀ ಹೆಬ್ಬಾಳ್ಕರ್ ಅವರು ತಿಳಿಸಿದ್ದಾರೆ.
ಗೃಹಲಕ್ಷ್ಮೀ ಯೋಜನೆಯ 2,000 ರೂ. ಹಣದಿಂದ ಎಲ್ಲರಿಗೂ ಅನುಕೂಲವಾಗಿದೆ. ಈ ಯೋಜನೆಯಿಂದ ಬಂದ ಹಣದಿಂದ ಕೆಲವರು ತಮ್ಮ ಅಗತ್ಯದ ವಸ್ತುಗಳನ್ನು ಖರೀದಿಸಿದ್ದಾರೆ. ಹಾಗೂ ಅನೇಕ ಮಹಿಳೆಯರಿಗೆ ಜೀವನ ನಿರ್ವಹಣೆಗೆ ಸಹಾಯಕವಾಗಿದೆ.
ಗೃಹಲಕ್ಷ್ಮೀ ಯೋಜನೆಯ 11 ಕಂತುಗಳ 22,000 ರೂ. ಹಣ ಅರ್ಹ ಮನೆ ಯಜಮಾನಿಯರ ಖಾತೆಗೆ ಜಮಾ ಆಗಿದೆ. 12 ಮತ್ತು 13 ನೇ ಕಂತಿನ ಹಣವು ಇದೆ ತಿಂಗಳು 7 ಮತ್ತು 9 ನೇ ತಾರೀಖಿನಂದು ಖಾತೆಗೆ ಸೇರಲಿದೆ.
ಹಣ ವರ್ಗಾವಣೆ ಮಾಡಿದ ನಂತರ ನಿಮ್ಮ ಖಾತೆಗೆ ಜಮಾ ಆಗಿದೇಯಾ ಎಂಬುದನ್ನು ತಿಳಿಯಲು ಗೃಹಲಕ್ಷ್ಮೀ ಯೋಜನೆ DBT Status ಚೆಕ್ ಮಾಡಬಹುದು.