ಎಲ್ಲರಿಗೂ ನಮಸ್ಕಾರ, 2,000 ರೂ. ಮೇಲ್ಪಟ್ಟ UPI ಪಾವತಿ ಮೇಲೆ GST ವಿಧಿಸಲು ಕೇಂದ್ರ ಸರ್ಕಾರ ಯೋಜಿಸುತ್ತಿದೆ ಎಂಬ ಸುದ್ದಿಯು ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ಹರಿದಾದುತ್ತಿತ್ತು, ಈ ಕುರಿತಾಗಿ ಕೇಂದ್ರ ಹಣಕಾಸು ಸಚಿವಾಲಯ ಮಾಹಿತಿ ನೀಡಿದೆ.
UPI ಪಾವತಿ ಮೇಲೆ ಸರಕು ಮತ್ತು ಸೇವಾ ತೆರಿಗೆ (GST) ವಿಧಿಸುವ ಯಾವುದೇ ಪ್ರಸ್ತಾವವು ಕೇಂದ್ರ ಸರ್ಕಾರದ ಮುಂದಿಲ್ಲ. ಹಾಗಾಗಿ, ಗ್ರಾಹಕರು ವದಂತಿಗಳಿಗೆ ಕಿವಿಗೊಡಬಾರದು ಎಂದು ಕೇಂದ್ರ ಹಣಕಾಸು ಸಚಿವಾಲಯವು ಸ್ಪಷ್ಟನೆ ನೀಡಿದೆ.
2000 ಕ್ಕಿಂತ ಹೆಚ್ಚು ಮೌಲ್ಯದ ವಹಿವಾಟಿನ ಮೇಲೆ GST ವಿಧಿಸಲು ಕೇಂದ್ರ ಮುಂದಾಗಿದೆ. ಶೀಘ್ರದಲ್ಲೇ, ಇದು ಕಾರ್ಯರೂಪಕ್ಕೆ ಬರಲಿದ್ದು, ಇದರಿಂದ ಗ್ರಾಹಕರಿಗೆ ಹೊರೆಯಾಗಲಿದೆ ಎಂಬ ಸುದ್ದಿಯು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಈ ಸುದ್ದಿಯಿಂದ ಗ್ರಾಹಕರು ಆತಂಕಕ್ಕೆ ಒಳಗಾಗಿದ್ದರು.
ಈ ವದಂತಿಗೆ ಸ್ಪಷ್ಟನೆ ನೀಡಿರುವ ಕೇಂದ್ರ ಹಣಕಾಸು ಸಚಿವಾಲಯವು ಇದೊಂದು ಸುಳ್ಳು ಸುದ್ದಿ ಜನರ ದಿಕ್ಕು ತಪ್ಪಿಸುವ ಇಂತಹ ಸುದ್ದಿಗಳನ್ನು ಜನರು ನಂಬಬಾರದು ಎಂದು ತಿಳಿಸಿದೆ. ಇಂತಹ ಯಾವುದೇ ಪ್ರಸ್ತಾಪ ಸರ್ಕಾರದ ಮುಂದೆ ಇಲ್ಲ ಎಂದು ಕೇಂದ್ರ ಸಚಿವಾಲಯ ಸ್ಪಷ್ಟನೆಯನ್ನು ನೀಡಿದೆ.
ಇತರೆ ಮಾಹಿತಿಗಳನ್ನು ಓದಿ:
ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್; ವಿದ್ಯಾಸಿರಿ ವಿದ್ಯಾರ್ಥಿವೇತನ ಮೊತ್ತ ಹೆಚ್ಚಳ..!